Lowest price this festive season! Code: FIRST10
Diet & Nutrition
Updated on 14 February 2024
ಗರ್ಭಧಾರಣೆ ಎಂಬುದು ತಾಯಿ ಮತ್ತು ಬೆಳೆಯುತ್ತಿರುವ ಮಗುವಿಗೆ ಸಂತೋಷ, ನಿರೀಕ್ಷೆ ಮತ್ತು ಅತ್ಯಂತ ಕಾಳಜಿಯ ಸಮಯ. ಗರ್ಭಿಣಿ ತಾಯಿಯಾಗಿ, ತಾಯಿ ಮತ್ತು ಮಗುವಿನ ಯೋಗಕ್ಷೇಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ
ಹಲವಾರು ಅದ್ಭುತ ಆಹಾರಗಳು ಲಭ್ಯವಿದ್ದರೂ, ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟ ಒಂದು ಆಹಾರವೆಂದರೆ ದಲಿಯಾ . ಈ ಲೇಖನದಲ್ಲಿ, ನಾವು ಗರ್ಭಾವಸ್ಥೆಯಲ್ಲಿ ದಲಿಯಾದ ನಂಬಲಾಗದ ಪ್ರಯೋಜನಗಳನ್ನು ಮತ್ತು ಇದು ಪ್ರತಿ ಗರ್ಭಿಣಿ ತಾಯಿಯ ಆಡುಗೆಯಲ್ಲಿ ಏಕೆ ಪ್ರಧಾನ ಆಗಿರಬೇಕು ಎಂದು ನೋಡೋಣ.
ದಲಿಯಾ ನುಚ್ಚು ಮಾಡಿದ ಗೋಧಿಯಿಂದ ತಯಾರಿಸಲಾದ ಒಂದು ಖಾದ್ಯವಾಗಿದ್ದು, ಶತಮಾನಗಳಿಂದ ತಿನ್ನಲಾಗುತ್ತಿದೆ. ನಾರಿನಂಶ ಮತ್ತು ಮ್ಯಾಂಗನೀಸ್ ಅಧಿಕವಾಗಿರುವ ಇದು ಪೋಷಕಾಂಶದ ಆಹಾರವಾಗಿದೆ. ದಲಿಯಾದ ಸಂಕೀರ್ಣ ಕಾರ್ಬ್ಗಳು ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ತೂಕ ನಿರ್ವಹಣೆಗೆ ಮತ್ತು ಮಧುಮೇಹ ಇರುವವರಿಗೆ ಸೂಕ್ತವಾಗಿದೆ. ಹಾಲಿನೊಂದಿಗೆ ಬೆರೆಸಿದಾಗ ಇದು ಸ್ನಾಯುವಿನ ತೂಕವನ್ನು ಹೆಚ್ಚಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.
ಇದು ನಿಮಗೆ ಮತ್ತು ನಿಮ್ಮ ಮಗುವಿಗೆ ದಲಿಯಾ ಎಷ್ಟು ಅನುಕೂಲಕರವಾಗಬಹುದು ಎಂಬುದನ್ನು ವಿವರಿಸುವ ಮಾರ್ಗವಾಗಿದೆ. ಮ್ಯಾಜಿಕ್ ದಲಿಯಾ ಎನ್ನುವುದು ನಿಮ್ಮ ದೇಹ ಮತ್ತು ಮಗುವಿನ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಈಗಾಗಲೇ ನಿಮ್ಮ ಹಿರಿಯರು, ಕುಟುಂಬ, ಮತ್ತು ಸ್ನೇಹಿತರು ನಿಮ್ಮ ಮನಸ್ಸಿನಲ್ಲಿ ಚೆನ್ನಾಗಿ ಅಚ್ಚೊತ್ತಿರಬೇಕು. ಆದ್ದರಿಂದ, ಒಟ್ಟಾರೆಯಾಗಿ, ದಲಿಯಾ ಅದ್ಭುತವಾಗಿದೆ, ಮತ್ತು ನೀವು ಅದನ್ನು ದಿನನಿತ್ಯ ನಿಮ್ಮ ಆಹಾರದ ಭಾಗವಾಗಿಸಬೇಕು.
ಪ್ರತಿ 100 ಗ್ರಾಂಗೆ ದಲಿಯಾ ನೀಡುವ ಪೋಷಕಾಂಶಗಳನ್ನು ನಾವು ಈಗ ಅರ್ಥಮಾಡಿಕೊಳ್ಳೋಣ:
ಶಕ್ತಿ - 152 ಕೆ. ಕೆ.
ಕೊಬ್ಬು - 3.41 ಗ್ರಾಂ
ಸ್ಯಾಚುರೇಟೆಡ್ ಕೊಬ್ಬುಗಳು - 1.615 ಗ್ರಾಂ
ಟ್ರಾನ್ಸ್ ಫ್ಯಾಟ್ಸ್ - 0 ಗ್ರಾಂ
ಮೊನೊನ್ಸ್ಯಾಚುರೇಟೆಡ್ ಕೊಬ್ಬುಗಳು - 0.893 ಗ್ರಾಂ
ಪಾಲಿಅನ್ಸ್ಯಾಚುರೇಟೆಡ್ ಕೊಬ್ಬುಗಳು - 0.478 ಗ್ರಾಂ
ಕಾರ್ಬೋಹೈಡ್ರೇಟ್ಗಳು - 27.7 ಗ್ರಾಂ
ಸಕ್ಕರೆ - 0.97 ಗ್ರಾಂ
ಫೈಬರ್ - 1.4 ಗ್ರಾಂ
ಪ್ರೋಟೀನ್ - 5.03 ಗ್ರಾಂ
ಸೋಡಿಯಂ - 143 ಮಿಗ್ರಾಂ
ಕೊಲೆಸ್ಟರಾಲ್ - 6 ಮಿಗ್ರಾಂ
ಪೊಟ್ಯಾಸಿಯಮ್ - 193 ಮಿಗ್ರಾಂ
ದಲಿಯಾ ಎಷ್ಟು ಪ್ರಯೋಜನಕಾರಿಯಾಗಬಹುದು ಎಂಬುದರ ಬಗ್ಗೆ ನಮ್ಮ ಹಿರಿಯರು ಯಾವಾಗಲೂ ನಮಗೆ ಹೇಳಿದ್ದನ್ನು ಹೊರತುಪಡಿಸಿ, ಗರ್ಭಾವಸ್ಥೆಯಲ್ಲಿ ದಲಿಯಾದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ಮಾತನಾಡೋಣ:
ಗರ್ಭಧಾರಣೆ ಎಂದರೆ ಫಿಟ್ ಆಗಿ ಉಳಿಯುವುದು ಮತ್ತು ನಿಮ್ಮ ಬೆಳವಣಿಗೆ ಮತ್ತು ನಿಮ್ಮ ಮಗುವಿನ ಬೆಳವಣಿಗೆ ಜೊತೆ ಜೊತೆಗೆ ಹೋಗುವುದನ್ನು ಖಾತ್ರಿಪಡಿಸಿಕೊಳ್ಳುವುದು. ಗರ್ಭಿಣಿಯಾಗಿರುವುದು ಎಂದರೆ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಅಥವಾ ಅನಗತ್ಯ ತೂಕವನ್ನು ಪಡೆಯುವುದು ಎಂದಲ್ಲ. ದಲಿಯಾದಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳು ಕಡಿಮೆಯಾಗಿದ್ದು, ಗರ್ಭಾವಸ್ಥೆಯಲ್ಲಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಇದು ಸೂಕ್ತ ಆಹಾರವಾಗಿದೆ. ಇದು ಪೂರ್ಣತೆಯ ಭಾವನೆಯನ್ನು ಒದಗಿಸುತ್ತದೆ, ಅತಿಯಾಗಿ ತಿನ್ನುವ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ.
ದಲಿಯಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಸ್ಪೈಕ್ ಮತ್ತು ಕ್ರ್ಯಾಶ್ಗಳನ್ನು ತಡೆಯುತ್ತದೆ. ದಲಿಯಾದ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಆಹಾರವನ್ನು ಜೀರ್ಣಿಸಿಕೊಳ್ಳಲು ಜಾಸ್ತಿ ಸಮಯ ತೆಗೆದುಕೊಳ್ಳುವುದರಿಂದ ರಕ್ತನಾಳಕ್ಕೆ ಗ್ಲುಕೋಸ್ನ ನಿಧಾನ ಬಿಡುಗಡೆಯನ್ನು ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಈ ಸ್ಥಿರತೆ ನಿರ್ಣಾಯಕವಾಗಿದೆ, ಏಕೆಂದರೆ ಇದು ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ನೀವು ಸಾಮಾನ್ಯ ಆಹಾರ, ಜಂಕ್ ಫುಡ್ ಅಥವಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಇಷ್ಟಪಡದಿರುವುದು ಹಲವು ಬಾರಿ ಇವೆ. ಈ ಸಮಯದಲ್ಲಿ, ದಲಿಯಾ ನಿಮ್ಮ ರಕ್ಷಕನಾಗಬಹುದು. ದಲಿಯಾ ಗೋಧಿಯಿಂದ ತಯಾರಿಸಲ್ಪಟ್ಟಿದೆ ಮತ್ತು ಗೋಧಿ ಧಾನ್ಯದ ಪ್ರತಿಯೊಂದು ತುಂಡು ನಿಮ್ಮ ದೇಹದಲ್ಲಿ ಅಗತ್ಯವಿರುವ ಮತ್ತು ಇಲ್ಲದಾದ ಎಲ್ಲಾ ಜೀವಸತ್ವಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ೆ
ಗರ್ಭಾವಸ್ಥೆಯಲ್ಲಿ, ಮಹಿಳೆಯ ಹಿಮೋಗ್ಲೋಬಿನ್ ಎಣಿಕೆ ವೇಗವಾಗಿ ಕೆಳಗಿಳಿಯಬಹುದು ಮತ್ತು ಗರ್ಭಾವಸ್ಥೆಯಲ್ಲಿ ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುವ ಅವಕಾಶವಿದೆ. ದಲಿಯಾ ಸೇವಿಸುವುದರಿಂದ ನಿಮ್ಮ ಹಿಮೋಗ್ಲೋಬಿನ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಿಮೋಗ್ಲೋಬಿನ್ ಸುಮಾರು 12 ಇರಬೇಕು ಮತ್ತು ದಲಿಯಾ ಈ ಸಂಖ್ಯೆಯನ್ನು ಸಾಕಷ್ಟು ಸುಲಭವಾಗಿ ಸಾಧಿಸಲು ನಿಮಗೆ ಸಹಾಯ ಮಾಡಬಹುದು!
ದಲಿಯಾ ಗೋಧಿ ಮತ್ತು ಹೊಟ್ಟು ಹೊರತುಪಡಿಸಿ ಏನೂ ಅಲ್ಲ. ಹೊಟ್ಟಿನ ಕಾರಣದಿಂದಾಗಿ ಈ ಆಹಾರದಲ್ಲಿ ನೈಸರ್ಗಿಕವಾಗಿ ನಾರಿನಂಶ ಹೆಚ್ಚಾಗಿದ್ದು, ಇದು ಕರುಳನ್ನು ಆರೋಗ್ಯಕರವಾಗಿಡಲು, ಮಲಬದ್ಧತೆಯಿಂದ ಮುಕ್ತವಾಗಿಡಲು ನೆರವಾಗುತ್ತದೆ. ಗರಿಷ್ಠ ಲಾಭಕ್ಕಾಗಿ, ಹಾಲು ಅಥವಾ ತರಕಾರಿಗಳೊಂದಿಗೆ ದಲಿಯಾ ಪ್ರತಿದಿನ ನಿಮ್ಮ ಆಹಾರದ ಭಾಗವಾಗಿರಬೇಕು. ಮಲಬದ್ಧತೆಯನ್ನು ತಪ್ಪಿಸುವ ಉತ್ತಮ ಮಾರ್ಗವೆಂದರೆ, ಅದು ಉಪಹಾರ ಆಗಿರಲಿ, ಊಟವಾಗಲಿ ಅದರಲ್ಲಿ ದಲಿಯಾವನ್ನು ಸೇವಿಸಬೇಕು.
ದಲಿಯಾ ಬಗ್ಗೆ ಉತ್ತಮ ಅಂಶವೆಂದರೆ ಇದನ್ನು ಬೇಯಿಸುವುದು ತುಂಬಾ ಸುಲಭ ಮತ್ತು ಇದು ಇತರ ಆಹಾರಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಗರ್ಭಧಾರಣೆಯು ಮಾನಸಿಕ ಬದಲಾವಣೆಗಳು ಮತ್ತು ಸೋಮಾರಿತನೆಯಿಂದ ತುಂಬಿರುತ್ತದೆ. ನೀವು ಎಲ್ಲಾ ಸಮಯದಲ್ಲೂ ಸಕ್ರಿಯವಾಗಿರುವುದಿಲ್ಲ ಮತ್ತು ಸುಲಭವಾದ ಆದರೆ ಪೌಷ್ಟಿಕಾಂಶವನ್ನು ಆಹಾರ ಮಾಡಲು ಬಯಸಬಹುದು. ಅಂತಹ ಸಮಯದಲ್ಲಿ ದಲಿಯಾ ನಿಮ್ಮ ಆಹಾರವಾಗಿರಬಹುದು!
ಯಾವುದೇ ತಾಯಿ ಗರ್ಭಾವಸ್ಥೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಹೊಂದಲು ಬಯಸುವುದಿಲ್ಲ. ನಿಮಗೆ ಕೊಲೆಸ್ಟರಾಲ್ ಬಂದರೆ, ವಿಶೇಷವಾಗಿ ನಿಮ್ಮ ಆಹಾರದಲ್ಲಿ ನೀವು ಹೆಚ್ಚಿನ ನಾರಿನಂಶವನ್ನು ಸೇವಿಸದಿದ್ದರೆ ಅದನ್ನು ನಿರ್ವಹಿಸುವುದು ಸವಾಲಾಗಿರುತ್ತದೆ. ದಲಿಯಾದಲ್ಲಿ ನಾರಿನಂಶ ಅಧಿಕವಾಗಿದ್ದು, ದೇಹಕ್ಕೆ ತ್ಯಾಜ್ಯ ಮತ್ತು ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.
ಎಲ್ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಕಡಿಮೆ ಮಾಡುವ ಮೂಲಕ ಮತ್ತು ಎಚ್ಡಿಎಲ್ (ಉತ್ತಮ ಕೊಲೆಸ್ಟ್ರಾಲ್) ಹೆಚ್ಚಿಸುವ ಮೂಲಕ, ಕೊಲೆಸ್ಟ್ರಾಲ್ ಮಟ್ಟವನ್ನು (ಉತ್ತಮ ಕೊಲೆಸ್ಟರಾಲ್ ಮಟ್ಟವನ್ನು) ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ದಲಿಯಾ ಹೃದಯಕ್ಕೆ ಆರೋಗ್ಯಕರ ಊಟದ ಆಯ್ಕೆಯಾಗಿದೆ.
ಒಬ್ಬ ಮಹಿಳೆ ಗರ್ಭಧರಿಸಿದ ತಕ್ಷಣ, ಅವಳು ಯಾವಾಗಲೂ ಯೋಚಿಸುವ ಮೊದಲ ವಿಷಯವೆಂದರೆ ಅವಳ ಹುಟ್ಟುವ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ. ಗರ್ಭಾವಸ್ಥೆಯಲ್ಲಿ ದಲಿಯಾ ಸೇವಿಸುವುದರಿಂದ ಕೇವಲ ತಾಯಿಗೆ ಮಾತ್ರವಲ್ಲ ಮಗುವಿಗೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಸಸ್ಯ ಆಧಾರಿತ ಪ್ರೋಟೀನ್ನ ಸಮೃದ್ಧ ಮೂಲವಾಗಿದೆ, ಇದು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಮುಖ್ಯವಾಗಿದೆ, ಜೊತೆಗೆ ತಾಯಿಯ ಅಂಗಾಂಶ ದುರಸ್ತಿ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ.
ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಬಹಳ ಬದಲಾವಣೆಗಳಿಗೆ ಒಳಗಾಗುವುದರಿಂದ, ದಣಿವು, ಸೋಮಾರಿತನ ಮತ್ತು ಸುಸ್ತು ಸಾಮಾನ್ಯವಾಗಿದೆ. ದಲಿಯಾ ಸಂಕೀರ್ಣ ಕಾರ್ಬೋಹೈಡ್ರೇಟ್ಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ, ಶಕ್ತಿಯ ನಿರಂತರ ಬಿಡುಗಡೆಯನ್ನು ಒದಗಿಸುತ್ತದೆ, ಇದು ಗರ್ಭಾವಸ್ಥೆಯಲ್ಲಿನ ಹೆಚ್ಚಿನ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಅತ್ಯಗತ್ಯವಾಗಿದೆ.
ನಿಮ್ಮ ಗರ್ಭಧಾರಣೆಯ ಕೊನೆಯ ತ್ರೈಮಾಸಿಕವನ್ನು ನೀವು ಸಮೀಪಿಸುತ್ತಿರುವಾಗ, ನಿಮ್ಮ ಮುಂದೆ ಇರುವ ಮಹತ್ತರ ಕಾರ್ಯದ ಬಗ್ಗೆ ನಿಮಗೆ ಆಶ್ಚರ್ಯ ಆಗದೆ ಇರದು- ಸ್ತನ್ಯಪಾನ. ಇದರ ತಯಾರಿಯಲ್ಲಿ, ಅನೇಕ ನಿರೀಕ್ಷಿತ ಅಮ್ಮಂದಿರು ಮೂರನೇ ತ್ರೈಮಾಸಿಕದಿಂದಲೇ ಗ್ಯಾಲಕ್ಟಾಗೋಗ್ಗಳನ್ನು (ಎದೆ ಹಾಲು ಉತ್ಪಾದನೆಗೆ ಸಹಾಯ ಮಾಡುವ ಆಹಾರಗಳು) ಸೇವಿಸಲು ಪ್ರಾರಂಭಿಸುತ್ತಾರೆ. ದಲಿಯಾ ಅಂತಹ ಒಂದು ಆಹಾರವಾಗಿದ್ದು, ನಿಮ್ಮ ದೇಹವು ನಿಮ್ಮ ಮಗುವಿಗೆ ಎದೆ ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ.
1. Jha, A. (2013). Optimization of instant dalia dessert pre-mix production by using response surface methodology. NCBI
2. Yang, J; Wang, H; Zhou, L et al. (2012). Effect of dietary fiber on constipation: A meta analysis. NCBI
3. Cooper, D.N; Martin, R.J and Keim, N.L. (2015). Does Whole Grain Consumption Alter Gut Microbiota and Satiety?. NCBI
Tags
10 Benefits Of Dalia During Pregnancy in Kannada, What is Dalia in Kannada, Nutrient Value of Dalia in Kannada, Dalia during pregnancy in Kannada, Dalia benefts during pregnany in Kannada, Dalia recipes in Kannada, Is Dalia safe during pregnancy in Kannada, can pregnants eat dalia in Kannada,Dalia in Pregnancy in Bengali, Dalia in Pregnancy in Tamil, Dalia in Pregnancy in Telugu , Dalia in Pregnancy: A Superfood for the Health of Both Mom and Baby in English
Yes
No
Written by
Ramya Bhat
Get baby's diet chart, and growth tips
Fetal Doppler Scan During Pregnancy: In which week should you get it done?
How Long Should Naps Be While Pregnant?
Blocked Fallopian Tubes: How They Affect Your Chances of Conceiving
How Do You Notify Your Employer That You Are Pregnant?
The Ultimate Guide to Consuming Tapioca During Pregnancy
Braxton Hicks Contractions or Real Labor: How to Tell Them Apart?
Mylo wins Forbes D2C Disruptor award
Mylo wins The Economic Times Promising Brands 2022
At Mylo, we help young parents raise happy and healthy families with our innovative new-age solutions:
baby carrier | baby soap | baby wipes | stretch marks cream | baby cream | baby shampoo | baby massage oil | baby hair oil | stretch marks oil | baby body wash | baby powder | baby lotion | diaper rash cream | newborn diapers | teether | baby kajal | baby diapers | cloth diapers |